kannada

ನಮ್ಮ ಬಗ್ಗೆ

ಕನ್ನಡ.ಕಾಮ್ - ಕನ್ನಡದ ಸಮಗ್ರ ಸಂಪನ್ಮೂಲ

ಕನ್ನಡ.ಕಾಮ್ (kannada.com) ಕನ್ನಡಿಗರಿಗೆ, ಕನ್ನಡ ಭಾಷೆ ಮತ್ತು ಕನ್ನಡಕ್ಕೆ ಸಂಬಂಧಿಸಿದ ಎಲ್ಲವನ್ನೂ ಅಂದರೆ – ಜನ, ಸ್ಥಳ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸಿ ಆಚರಿಸುವ ವೇದಿಕೆಯಾಗಿದೆ.

ಜನರ ಪ್ರಾಥಮಿಕ ಅವಶ್ಯಕತೆಗಳು ಪೂರೈಸುವ ತನಕ ಯಾವುದೇ ಆಚರಣೆ ಸಾಧ್ಯವಿಲ್ಲ. ಆದರಿಂದ ಈ ನಿಟ್ಟಿನಲ್ಲಿ, ಕನ್ನಡ.ಕಾಮ್‌ನ ಉದ್ದೇಶವು ಭಾಷೆಗೆ ಆರ್ಥಿಕ ಪ್ರಸ್ತುತತೆಯನ್ನು ಮರಳಿ ತರುವುದು, ಹಾಗೂ ಕೇವಲ ಕನ್ನಡವನ್ನು ಮಾತ್ರ ತಿಳಿದಿರುವವರು ಸಹ ಇಂಗ್ಲಿಷ್ ಅಥವಾ ಹಿಂದಿಯಂತಹ ಇತರ ಭಾಷೆಗಳ ಅಗತ್ಯವಿಲ್ಲದೆ, ಆರ್ಥಿಕ ವ್ಯವಸ್ಥೆಯಲ್ಲಿ ಮತ್ತು ವಾಣಿಜ್ಯ ಮುಖ್ಯವಾಹಿನಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಧ್ಯವಾಗಿಸುವುದು.

ಕನ್ನಡ.ಕಾಮ್‌ ಸ್ಥಳೀಯ ಉದ್ಯಮಿಗಳ ಜೊತೆ ಕೈಗೂಡಿಸಿ ಅವರ ಸುಸ್ಥಿರ ಮತ್ತು ಸುರಕ್ಷಿತ ಆರ್ಥಿಕ ಭವಿಷ್ಯವನ್ನು ಧೃಡಪಡಿಸಲು ಹಾಗೂ ಅವರ ವಿಶಿಷ್ಟ ಭಾಷಾ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಸಂಭ್ರಮಿಸಲು ಸಹಕರಿಸುತ್ತದೆ.

ಗಣಕೀಕರಣದಿಂದ ಡಿಜಿಟಲ್ ಸ್ಥಳೀಯರು ಹೆಚ್ಚುತ್ತಿರುವಾಗ, ಕನ್ನಡಿಗರು ಇತರ ಭಾಷೆ ಅಥವಾ ಸಂಸ್ಕೃತಿಯನ್ನು ಅನುಕರಿಸುತ್ತಿದ್ದಾರೆ. ಇದರ ಬಗ್ಗೆ ಕಾಳಜಿಯುಳ್ಳ ಅನೇಕ ಕನ್ನಡಿಗರು ಇತರ ಕನ್ನಡಿಗರೊಂದಿಗೆ ಹೆಮ್ಮೆಯಿಂದ ಡಿಜಿಟಲ್ ಮಾಧ್ಯಮದ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಹಾಗೂ ಇದಕ್ಕೆ ನಾವು ಸೇತುವೆಯಾಗಲು ಬಯಸುತ್ತೇವೆ.

ಸಾಂಸ್ಕೃತಿಕ ಕಲಾಕೃತಿಗಳು, ಸಾಂಪ್ರದಾಯಿಕ ಕಲೆ ಮತ್ತು ಕಲಾ ಪ್ರಕಾರಗಳು, ಹಳೆಯ ಸಾಹಿತ್ಯ ಮುಂತಾದ ಅಪೂರ್ವ ಸಂಪತ್ತು, ದಾಖಲೆಗಳ ಸಂರಕ್ಷಣೆಯಿಲ್ಲದೆ ಮತ್ತು ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ಬಲವಾದ ಒತ್ತಡವಿಲ್ಲದೆ ಕಣ್ಮರೆಯಾಗುತ್ತಿವೆ. ಕನ್ನಡ.ಕಾಮ್‌ ಮೂಲಕ ಇವುಗಳ ಸಂರಕ್ಷಣೆಯ ಪ್ರಯತ್ನಗಳನ್ನು ಬೆಂಬಲಿಸುವ ಗುರಿಯನ್ನು ನಾವು ಹೊಂದಿದ್ದೇವೆ.