• ಎಲ್. ಜೀವನ್ - ಬಸವನಗುಡಿ ( ಬೆಂಗಳೂರು ) ಕ್ಷೇತ್ರ - ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ - ಚುನಾವಣೆ 2023

    Apr 6, 2023

  • 2023ಕ್ಕೆ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳಿಗೆ ಆಹ್ವಾನ

    Mar 29, 2023

  • ಕರ್ನಾಟಕ ೨೦೨೩ ಚುನಾವಣೆ - ಅಭ್ಯರ್ಥಿಗಳ ಪರಿಚಯ ಸಂದರ್ಶನಕ್ಕೆ ಆಹ್ವಾನ

    Mar 20, 2023

ಅಭ್ಯರ್ಥಿಗಳಿಗೆ ಆಹ್ವಾನ

ನಮಸ್ಕಾರ. ಇದು 2023ಕ್ಕೆ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳಿಗೆ ಆಹ್ವಾನವಾಗಿದೆ. ನೀವು ಹಾಲಿ ಶಾಸಕ ಅಥವಾ ಆಕಾಂಕ್ಷಿ ಅಭ್ಯರ್ಥಿಯಾಗಿರಬಹುದು. ಕರ್ನಾಟಕ ಅಸೆಂಬ್ಲಿಯಲ್ಲಿ ನಿಮ್ಮ ಕ್ಷೇತ್ರವನ್ನು ಪ್ರತಿನಿಧಿಸಲು ಮತದಾರರಿಗೆ ನೀವೇ ಏಕೆ ಉತ್ತಮ ಅಭ್ಯರ್ಥಿಯೆಂದು ತಿಳಿಸಲು, ನಿಮ್ಮ ಕ್ಷೇತ್ರದ ಮತದಾರರನ್ನು ತಲುಪಲು, ಇದು ನಿಮಗೆ ಒಂದು ಉತ್ತಮ ಮತ್ತು ಉಚಿತ ಅವಕಾಶವಾಗಿದೆ. Zoom ಕರೆ ಮೂಲಕ ಹತ್ತು ಸರಳವಾದ ಪ್ರಶ್ನೆಗಳಿಗೆ ನಿಮ್ಮ ಉತ್ತರಗಳನ್ನು ರೆಕಾರ್ಡ್ ಮಾಡಲಾಗುತ್ತದೆ ಮತ್ತು ನಮ್ಮ ಕನ್ನಡ.ಕಾಂ ಜಾಲತಾಣಗಳಲ್ಲಿ ಹಂಚಲಾಗುತ್ತದೆ. ನೀವು ಯಾವುದೇ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದರೆ, ಅಥವಾ ಸ್ವತಂತ್ರ ಅಭ್ಯರ್ಥಿಯಾಗಿದ್ದರೂ ಸಹ ನಿಮಗೂ, ನಿಮ್ಮ ಪಕ್ಷಕ್ಕೂ ಯಾವುದೇ ಶುಲ್ಕವಿಲ್ಲ. ನಿಮ್ಮ ಸಂದರ್ಶನವನ್ನು ರೆಕಾರ್ಡ್ ಮಾಡಿಕೊಳ್ಳಲು ನಮ್ಮನ್ನು samparka@kannada.com ಮೂಲಕ ಸಂಪರ್ಕಿಸಿ.